ಕ್ರೀಡೆ
ಕಪ್ ಗೆದ್ದಾಯ್ತು ಗೆಳೆಯ, ಇನ್ನು ಹೋಗಿ ಮಗುವಿನ ಡೈಪರ್ ಚೇಂಜ್ ಮಾಡು-ಸಾಲ್ಟ್ ಕಾಲೆಳೆದ ಕೊಹ್ಲಿ!

ಅಹಮಾದಾಬಾದ್: ಆರ್‍ಸಿಬಿ ಗೆಲುವಿನಲ್ಲಿ ಫಿಲ್ ಸಾಲ್ಟ್ ಕೊಡುಗೆಯನ್ನು ಹೇಳುವುದೇ ಬೇಡ, ಎಲ್ಲಾ ಪಂದ್ಯಗಳಲ್ಲೂ ಸಹ ತಮ್ಮ ಸ್ಧಿರತೆ ಕಾಯ್ದುಕೊಂಡು ಸಾಲ್ಸಟ್ ನೀಡಿದ ಪ್ರದರ್ಶನದಿಂದಾಗಿ ಆರ್‍ಸಿಬಿಯ ಕಪ್ ನವರೆಗಿನ ಸಾಧನೆ ಕೈಗೊಡಿದೆ, ಇದೇ ವೇಳೆ ಕಪ್ ಗೆದ್ದ ಬಳಿಕ ಕೊಹ್ಲಿ ತಮ್ಮ ಗೆಳೆಯನ ಜೊತೆಗಿನ ಫೋಟೋ ಹಂಚಿಕೊಂಡಿದ್ದು, ಲೈಟಾಗಿ ಕಾಲೆಳೆದಿದ್ದಾರೆ,
ಐಪಿಎಲ್ ಪಂದ್ಯಾವಳಿ ಶುರುವಾದಾಗಲೇ ಫಿಲ್ ಮಡದಿ ಮಗುವಿಗೆ ಜನ್ಮ ನೀಡಿದ್ದರು, ಕೊಡಲೇ ಹೋಗಿ ಮಡದಿ ಮತ್ತು ಮಗುವನ್ನು ಭೇಟಿಯಾದ ಸಾಲ್ಟ್ ಮತ್ತೆ ಬಂದು ತಂಡದೊಡನೆ ಸೇರಿಕೊಂಡಿದ್ದರು, ಇದನ್ನು ಉಲ್ಲೇಖಿಸರುವ ವಿರಾಟ್ ಕೊಹ್ಲಿ ಸಖತ್ ಆಗಿ ಆಡಿದ್ಯಾ ಪಾರ್ಟನರ್, ಈಗ ನಿಜವಾದ ವಿಷಯಕ್ಕೆ ಬರೋಣ, ಹೋಗಿ ಮಗುವಿನ ಡೈಪರ್ ಚೇಂಜ್ ಮಾಡಲು ರೆಡಿಯಾಗು ಎಂದು ತಮಾಷೆ ಮಾಡಿದ್ದಾರೆ,