d boss
ದರ್ಶನ್ ಅಭಿಮಾನಿಗಳಿಂದ ಕಿರುಕುಳ: ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರಿಕೆ

- /home/u521927855/domains/hosasuddi.in/public_html/wp-content/plugins/mvp-social-buttons/mvp-social-buttons.php on line 27
https://hosasuddi.in/wp-content/uploads/2025/07/Ramya-5.webp&description=ದರ್ಶನ್ ಅಭಿಮಾನಿಗಳಿಂದ ಕಿರುಕುಳ: ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರಿಕೆ', 'pinterestShare', 'width=750,height=350'); return false;" title="Pin This Post">
- Share
- Tweet /home/u521927855/domains/hosasuddi.in/public_html/wp-content/plugins/mvp-social-buttons/mvp-social-buttons.php on line 72
https://hosasuddi.in/wp-content/uploads/2025/07/Ramya-5.webp&description=ದರ್ಶನ್ ಅಭಿಮಾನಿಗಳಿಂದ ಕಿರುಕುಳ: ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರಿಕೆ', 'pinterestShare', 'width=750,height=350'); return false;" title="Pin This Post">
ಬೆಂಗಳೂರು: ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್ ಅಭಿಮಾನಿಗಳ ವಿರುದ್ಧ ಕಷ್ಟಕ್ಕೊಳಗಾಗಿರುವ ನಟಿ ರಮ್ಯಾ ಈಗ ದೂರು ನೀಡಲು ಮುಂದಾಗಿದ್ದು, ಈ ವಿವಾದ ಸ್ಯಾಂಡಲ್ವುಡ್ನಲ್ಲಿ ಬಿರುಕುಂಟಿಸಿದೆ.
ರೇಣುಕಾಸ್ವಾಮಿ ಕುಟುಂಬದ ಪರ ನಿಂತ ನಟಿ ರಮ್ಯಾ ಅವರ ವಿರುದ್ಧ ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದು, ಇದರಿಂದ ಅವರು ಗರಂ ಆಗಿದ್ದಾರೆ. ರಮ್ಯಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳಿಂದ ಬಂದ ಅಶ್ಲೀಲ ಮೆಸೇಜುಗಳ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿದ್ದಾರೆ.
ಈ ನಡುವೆ, ದರ್ಶನ್ ಅಭಿಮಾನಿಗಳಿಗೆ ತೆರೆಯಲಾದ ಅಧಿಕೃತ ಫ್ಯಾನ್ಸ್ ಪೇಜ್ ʻಡಿ ಕಂಪನಿʼ (DCompany) ಮೂಲಕ ಅಭಿಮಾನಿಗಳಿಗೆ ಯಾವುದೇ ವಿವಾದಕ್ಕೆ ಪ್ರತಿಕ್ರಿಯಿಸಬೇಡಿ ಮತ್ತು ತಲೆ ಕೆಡಿಸಿಕೊಳ್ಳಬೇಡಿ ಎಂದು ಮನವಿ ಮಾಡಲಾಗಿದೆ. “ಡಿ ಬಾಸ್ ಮೇಲೆ ಗೌರವವಿರುವ ಪ್ರತಿಯೊಬ್ಬ ಅಭಿಮಾನಿಯೂ ವಿವಾದಗಳಿಗೆ ದೂರವಿರಿ” ಎಂದು ಫ್ಯಾನ್ಸ್ ಪೇಜ್ ಪ್ರಕಟಣೆ ತಿಳಿಸಿದೆ.
ಪ್ರಮುಖ ಅಂಶಗಳು:
- ನಟಿ ರಮ್ಯಾ ದರ್ಶನ್ ಅಭಿಮಾನಿಗಳ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
- ರೇಣುಕಾಸ್ವಾಮಿ ಕುಟುಂಬದ ಪರ ನಿಂತ ರಮ್ಯಾ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕಿರುಕುಳ.
- ʻಡಿ ಕಂಪನಿʼ ಫ್ಯಾನ್ಸ್ ಪೇಜ್ ಮೂಲಕ ವಿವಾದಗಳಿಗೆ ಪ್ರತಿಕ್ರಿಯಿಸಬೇಡಿ ಎಂಬ ಮನವಿ.
- ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶಗಳ ಸ್ಕ್ರೀನ್ಶಾಟ್ ಹಂಚಿಕೆ.
d boss
ಹತ್ಯೆ ನಡೆದ ಬಳಿಕ ಪವಿತ್ರಾಗೆ ದರ್ಶನ್ ಮೆಸೇಜ್- ಡಿ ಗ್ಯಾಂಗ್ ಗೆ ಉರುಳಾಗಲಿದೆ ಸ್ಕಿçÃನ್ ಮಿರರ್ ಟೆಕ್ನಾಲಜಿ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಈಗಾಗಲೇ ಪರಪ್ಪನ ಅಗ್ರಹಾರ ಸೇರಿದ್ದಾರೆ, ನಿನ್ನೆ ಕೋರ್ಟ್ ಜುಲೈ 18ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆಗೆ ಆದೇಶ ನೀಡಿದೆ,
ಇನ್ನು ಈ ಪ್ರಕರಣ ಸಂಬAಧ ಪೊಲೀಸ್ ತನಿಖೆ ಮುಂದುವರೆದಿದೆ, ಇದೀಗ ಪೊಲೀಸರಿಗೆ ದರ್ಶನ್ ವಿರುದ್ಧ ಪ್ರಬಲ ಸಾಕ್ಷಿ ದೊರೆತಿದೆ ಎನ್ನಲಾಗುತ್ತಿದ್ದು, ದರ್ಶನ್ ಫೋನ್ ನಿಂದ ಮಹತ್ವದ ಸಾಕ್ಷಿಯನ್ನು ಪಡೆದೊಕೊಳ್ಳಲಾಗಿದೆ,
ಶೆಡ್ ನಲ್ಲಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಬಳಿಕ ದರ್ಶನ್ ಪವಿತ್ರಾ ಗೌಡಗೆ ಮೆಸೇಜ್ ಮಾಡಿದ್ದಾರೆ, ಬಳಿಕ ಮೆಸೇಸ್ ನ್ನು ಡಿಲೀಟ್ ಮಾಡಲಾಗಿದೆ ಎನ್ನಲಾಗುತ್ತಿದ್ದು, ಈ ಸಂಬAಧ ಎಫ್ಎಸ್ಎಲ್ ಗೆ ಹೆಚ್ಚಿನ ತನಿಖೆ ವಹಿಸಲಾಗಿತ್ತು ಈಗ ಅವರಿಂದ ಪೊಲೀಸರಿಗೆ ಮತ್ತೊಂದು ಸಾಕ್ಷಿ ದೊರೆತಿದೆ,
ಪವಿತ್ರಾ ಗೌಡ ಮನೆಯಲ್ಲಿ ದೊರೆತ ಲ್ಯಾಪ್ ಟಾಪ್ ನಿಂದ ಸಂದೇಶ ರವಾನೆಯಾಗಿದೆ ಎಂಬ ಮಾಹಿತಿ ದೊರೆತಿದ್ದು ಈ ಸಂಬAಧ ಪೊಲೀಸರು ಸ್ಕಿçÃನ್ ಮಿರರ್ ಮಾಡಲು ಮುಂದಾಗಿದ್ದಾರೆ, ಸ್ಕಿçÃನ್ ಮಿರರ್ ನಿಂದ ಡಿಲಿಟ್ ಆದ ಮೆಸೆಜ್ ರಿಟ್ರೀವ್ ಮಾಡಬಹುದು, ಇದರಿಂದ ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಪ್ರಮುಖ ಸಾಕ್ಷಿ ದೊರೆತಂತಾಗುತ್ತದೆ,
d boss
ಕೊಲೆ ಬಳಿಕ ರೇಣುಕಾಸ್ವಾಮಿ ಶರ್ಟ್ ಬದಲಾಯಿಸಿದ ಹಂತಕರು.. ಇವ್ರು ಮಾಡಿರೋ ಪ್ಲಾನ್ ಒಂದೆರಡಲ್ಲ!

ರೇಣುಕಾಸ್ವಾಮಿ ಕೊಲೆಗೆ ಹಂತಕರು ಸಾಕಷ್ಟು ಪ್ಲಾನ್ ಮಾಡಿದ್ದು, ಸದ್ಯ ಒಂದರ ಮೇಲೆ ಒಂದರಂತೆ ಸಾಕ್ಷಿಗಳು ಸಿಗುತ್ತಿವೆ. ಅದರಲ್ಲಿ ರೇಣುಕಾಸ್ವಾಮಿ ಧರಿಸುವ ಬಟ್ಟೆಯನ್ನು ಕೂಡ ಹಂತಕರು ಬದಲಾಯಿಸಿದ್ದಾರೆ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ದರ್ಶನ್ ಆ್ಯಂಡ್ ಟೀಂ ಕೊಲೆಗೂ ಮುಂಚೆ ಮತ್ತು ನಂತರ ಸಾಕಷ್ಟು ಪ್ಲಾನ್ ಮಾಡಿಕೊಂಡಿದ್ದಾರೆ. ಕೊಲೆಯನ್ನು ಮುಚ್ಚಿಹಾಕಲು ಯೋಜನೆ ಹಾಕಿಕೊಂಡಿದ್ದರು. ಆದರೆ ಪೊಲೀಸರು ಮಾತ್ರ ಹಂತಕರ ದಾರಿ ಸೆರೆ ಹಿಡಿದಿದ್ದಾರೆ. ಇಂಚಿಂಚು ಮಾಹಿತಿಯನ್ನು ಹೊರತೆಗೆದಿದ್ದಾರೆ. ರೇಣುಕಾಸ್ವಾಮಿ ಅವರು ಮನೆಯಿಂದ ಹೊರಡುವಾಗ ಕ್ರೀಂ ಬಣ್ಣದ ಬಟ್ಟೆಯನ್ನು ಧರಿಸಿದ್ದರು. ಆದರೆ ಸುಮನಹಳ್ಳಿ ಬಳಿಯ ಮೋರಿಯಲ್ಲಿ ರೇಣುಕಾಸ್ವಾಮಿ ಮೃತದೇಹ ಸಿಕ್ಕಾಗ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿರೋದು ಬೆಳಕಿಗೆ ಬಂದಿದೆ. ರೇಣುಕಾಸ್ವಾಮಿ ಪತ್ನಿ ಕೂಡ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಹೀಗಾಗಿ ಕೊಲೆಗಡುಕರು ರೇಣುಕಾಸ್ವಾಮಿ ಕೊಲೆಯ ಬಳಿಕವು ಪ್ಲಾನ್ ಮಾಡಿರೋದು ಗೊತ್ತಾಗಿದೆ. ಇದಲ್ಲದೆ ರೇಣುಕಾಸ್ವಾಮಿ ಮೃತದೇಹವನ್ನು ಯಾವ ಸಿಸಿಟಿವಿಗೂ ತಿಳಿಯದಂತೆ ಸುಮನಹಳ್ಳಿ ಮೋರಿ ಬಳಿ ತಂದು ಬಿಸಾಕಿದ್ದಾರೆ. ಇನ್ನು ಈ ಕೊಲೆಯನ್ನು ಮುಚ್ಚಾಕಲು ದರ್ಶನ್ 30 ಲಕ್ಷ ರೂಪಾಯಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಪ್ರತಿಯೊಬ್ಬರಿಗೂ ತಲಾ 5 ಲಕ್ಷದಂತೆ ನೀಡಿದ್ದಾರೆ. ಈ ವಿಚಾರವನ್ನು ಆರೋಪಿಗಳು ತನಿಖೆ ವೇಳೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಇವಿಷ್ಟು ಮಾತ್ರವಲ್ಲದೆ, ರೇಣುಕಾಸ್ವಾಮಿ ಮೃತದೇಹ ಸಿಕ್ಕ ಬಳಿಕ ಹಂತಕರು ಪೊಲೀಸ್ ಠಾಣೆಗೆ ಬಂದು ತಾವೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಹಣದ ವಿಚಾರವಾಗಿ ಕೊಲೆ ಮಾಡಿರುವುದಾಗಿ ಸುಳ್ಳು ಹೇಳಿದ್ದಾರೆ. ಬಳಿಕ ಹಂತಕರ ಮೊಬೈಲ್ ಟ್ರೇಸ್ ಮಾಡಿದಾಗ ನಟ ದರ್ಶನ್ ಜೊತೆಗೆ ಕರೆ ಮಾಡಿರೋದು ಗೊತ್ತಾಗಿದೆ. ಬಳಿಕ ತನಿಖೆ ಚುರುಕುಗೊಂಡಿದ್ದು, ನಟನ್ನು ಅರೆಸ್ಟ್ ಮಾಡಲಾಗಿದೆ. ಬಳಿಕ ಹಂತ ಹಂತವಾಗಿ ಈ ಕೊಲೆಯ ಹಿಂದಿರುವ ಕೈಗಳನ್ನು ಅರೆಸ್ಟ್ ಮಾಡಿದ್ದಾರೆ.
cinema
ದೋಸ್ತಿಗೆ ಗ್ರೀನ್ ಸಿಗ್ನಲ್ : ಡಿ ಬಾಸ್ ?

ಬೆಂಗಳೂರು: ಅಭಿಮಾನಿಗಳಿಗೆ ಡಿ ಬಾಸ್ ಬ್ಯಾಕ್ ಟು ಬ್ಯಾಕ್ ಸಿಹಿ ಸುದ್ದಿಯನ್ನು ಕೊಡ್ತಿದ್ದಾರೆ, ಸಂಸದೆ ಸುಮಲತಾ ಅಂಬರೀಷ್ ಬರ್ತ್ಡೇ ವೇಳೆ ದರ್ಶನ್ ಹಾಗೂ ಸುದೀಪ್ 6 ವರ್ಷಗಳ ಬಳಿಕ ಮುಖಾಮುಖಿಯಾಗಿದ್ದರು, ಈ ಗೆಳೆಯರು ದೂರವಾದ ಮೇಲೆ ಯಾವುದೇ ವೇದಿಕೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ, ರಾಜ್ಯದ ಕೋಟ್ಯಾಂತರ ಅಭಿಮಾನಿಗಳು ಇವರಿಬ್ಬರು ಮತ್ತೆ ಒಂದಾಗ್ಬೇಕು ಎಂದು ಎದುರು ನೋಡುತ್ತಿದ್ದಾರೆ, ಈ ಗೆಳೆಯರು ಒಂದೇ ವೇದಿಕೆ ಮೇಲಿದ್ದ ವಿಡಿಯೋ ಎಲ್ಲಿರಿಗೂ ಸಂತೋಷ ತಂದಿದೆ, ಇವರಿಬ್ಬರ ನಡುವೆ ಸುಮಲತಾ ಸಂಧಾನ ಮಾಡಿಸಿದ್ದಾರೆ, ಇವರ ಮತ್ತೆ ಒಂದಾಗ್ತಾರೆ ಅಂತೆಲ್ಲ ಚರ್ಚೆ ನಡೆಯುತ್ತಿದ್ದ ಬೆನ್ನಲ್ಲೇ ಡಿ ಬಾಸ್ ಮಾಡಿರುವ ಪೋಸ್ಟ್ ಮತ್ತಷ್ಟು ಕುತೂಹಲ ಹುಟ್ಟಿಹಾಕಿದೆ,
ಜೋಡೆತ್ತಗಳನ್ನು ಹಿಡಿದುಕೊಂಡಿರುವ ಫೋಟೋ ಒಂದನ್ನೂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಕಾಲಾಯ ತಸ್ಮೈ ನಮಃ ಎಂಬ ಸಾಲುಗಳನ್ನು ಬರೆದಿದ್ದಾರೆ ಇದು ಕಿಚ್ಚ ಸುದೀಪ್ ಮತ್ತು ದರ್ಶನ್ ಒಂದಾಗುವ ಕಾಲ ಸಮೀಪ ಬಂದಿದೆ ಎಂದು ಹೇಳಲಾಗುತ್ತಿದೆ, ಏಕೆಂದರೆ ಪೋಸ್ಟ್ ಮಾಡಿರುವ ಜೋಡೆತ್ತುಗಳ ಫೋಟೋ ಇದಕ್ಕೆ ಪುಷ್ಟಿ ಕೊಟ್ಟಂತೆ ಇದೆ, ಇದಕ್ಕಾಗಿ ಫ್ಯಾನ್ಸ್ ವಿಧ ವಿಧವಾದ ಕಮೆಂಟ್ಸ್ ಮಾಡುತ್ತಿದ್ದಾರೆ,
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು1 year ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು8 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ