Connect with us

ಸಿನಿಮಾ

ಪ್ರತಿಷ್ಠಿತ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿಗೆ ಭಾಜನರಾದ ಖ್ಯಾತ ನಟಿ ವಹೀದಾ ರೆಹಮಾನ್​ಗೆ ಅಭಿನಂದನೆಗಳ ಮಹಾಪೂರ

ವಹೀದಾ ರೆಹಮಾನ್​ರ ವೃತ್ತಿಜೀವನ ಆರಂಭ ಆಗಿದ್ದು 1955ರಲ್ಲಿ.ತೆಲುಗಿನ ರೋಜುಲು ಮಾರಾಯಿ,ಸಿನಿಮಾ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ದೇವ್​ ಆನಂದ್​ ನಟನೆಯ ಸಿಐಡಿ,ಸಿನಿಮಾ ಮೂಲಕ ವಹೀದಾ ರೆಹಮಾನ್​ ಅವರು ಬಾಲಿವುಡ್​ಗೆ ಎಂಟ್ರಿ ಪಡೆದರು.ಬಳಿಕ ಪ್ಯಾಸಾ,ಕಾಗಜ್​ ಕೆ ಫೂಲ್​, ಸಾಹಿಬ್​ ಬಿಬಿ ಔರ್​ ಗುಲಾಮ್​ ಮುಂತಾದ ಸಿನಿಮಾಗಳ ಮೂಲಕ ಅವರು ಅಪಾರ ಜನಪ್ರಿಯತೆ ಗಳಿಸಿದರು.ಬಣ್ಣದ ಲೋಕದಲ್ಲಿ 5 ದಶಕಗಳ ಕಾಲ ಸಕ್ರಿಯವಾಗಿದ್ದ ವಹೀದಾ ರೆಹಮಾನ್​ ಅವರು 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.ಮನಮೋಹಕವಾದ ತಮ್ಮ ಅಭಿನಯದ ಮೂಲಕ ಅವರು ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.ಹೆಚ್ಚಾಗಿ ಹಿಂದಿ ಸಿನಿಮಾಗಳಲ್ಲಿ ನಟಿಸಿದ ಅವರು ತೆಲುಗು, ಮಲಯಾಳಂ, ತಮಿಳು, ಬೆಂಗಾಲಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.ಭಾರತೀಯ ಚಿತ್ರರಂಗದ ಜನಪ್ರಿಯ ನಟಿ ವಹೀದಾ ರೆಹಮಾನ್​ ಅವರಿಗೆ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಚಿತ್ರರಂಗದಲ್ಲಿ ಸಾಧನೆ ಮಾಡಿದವರಿಗೆ ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿ ಇದಾಗಿದ್ದು, ಹಿರಿಯ ನಟಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ಘೋಷಣೆ ಆದ ಬಳಿಕ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ವಹೀದಾ ರೆಹಮಾನ್​ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.ಈಗಾಗಲೇ ರಾಷ್ಟ್ರ ಪ್ರಶಸ್ತಿ,ಫಿಲ್ಮ್ ಫೇರ್​ ಪ್ರಶಸ್ತಿ,ಪದ್ಮಶ್ರೀ,ಪದ್ಮ ಭೂಷಣ ಮುಂತಾದ ಗೌರವಗಳು ಅವರಿಗೆ ಸಂದಿವೆ.ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ವಹೀದಾ ರೆಹಮಾನ್​ ಅವರಿಗೆ ಈ ವರ್ಷದ ದಾದಾ ಸಾಹೇಬ್​ ಫಾಲ್ಕೆ ಅವಾರ್ಡ್​ ಘೋಷಣೆ ಮಾಡಲು ನನಗೆ ಅತೀವ ಸಂತಸ ಆಗುತ್ತಿದೆ. ಬಾಲಿವುಡ್​ನ ಅನೇಕ ಸಿನಿಮಾಗಳಲ್ಲಿ ಅವರು ಮನೋಜ್ಞವಾಗಿ ಅಭಿನಯಿಸಿದ್ದಾರೆ. ದಾದಾ ಸಾಹೇಬ್​ ಫಾಲ್ಕೆ ಪಡೆಯಲಿರುವ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ’ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್​ ಠಾಕೂರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.ಇಂದಿನ ಅನೇಕ ನಟಿಯರಿಗೆ ಅವರು ಮಾದರಿ ಆಗಿದ್ದಾರೆ.ಬಾಲಿವುಡ್​ ಹಲವು ಹೀರೋಗಳ ಜೊತೆ ಅವರು ಸಿನಿಮಾ ಮಾಡಿದ್ದಾರೆ.

ಸಿನಿಮಾ

ಮಲಯಾಳಂ ನಟ ಶನ್ವಾಜ್ ನಿಧನ: ಸುಮಲತಾ ಅವರಿಂದ ಭಾವುಕ ಶ್ರದ್ಧಾಂಜಲಿ

ತಿರುವನಂತಪುರಂ: ಮಲಯಾಳಂ ಚಿತ್ರರಂಗದ ದಂತಕಥೆ ಪ್ರೇಮ್ ನಜೀರ್ ಅವರ ಪುತ್ರ, ಹಿರಿಯ ನಟ ಅಬ್ದುಲ್ ಶನ್ವಾಜ್ (71) ಅವರು ನಿಧನರಾಗಿದ್ದಾರೆ. ಹಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಇಂದು ನಿಶ್ಶಬ್ದವಾಗಿ ಬದುಕು ಬಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಶನ್ವಾಜ್ ಅವರ ನಿಧನಕ್ಕೆ ಹಲವು ಹಳೆಯ ಸಹನಟರು, ಅಭಿಮಾನಿಗಳು ಸಂತಾಪ ವ್ಯಕ್ತಪಡಿಸುತ್ತಿದ್ದು, ಹಿರಿಯ ನಟಿ ಹಾಗೂ ಸಂಸದೆಯಾಗಿರುವ ಸುಮಲತಾ ಅಂಬರೀಶ್ ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ.

“ಅಬ್ದುಲ್ ಶನ್ವಾಜ್ ನಿಧನ ಸುದ್ದಿ ನನಗೆ ತುಂಬಾ ದುಃಖ ತಂದಿದೆ. ನಾವು 80ರ ದಶಕದಲ್ಲಿ ಅನೇಕ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೇವೆ. ಅವರ ತಂದೆ ಪ್ರೇಮ್ ನಜೀರ್ ಜೊತೆಗೂ ನಟನೆಗೆ ಅವಕಾಶ ಲಭ್ಯವಾಗಿತ್ತು. ಶೂಟಿಂಗ್ ಬಿಡುವಿನ ಸಮಯದಲ್ಲಿ ಶನ್ವಾಜ್ ಜತೆ ಬ್ಯಾಡ್ಮಿಂಟನ್ ಅಥವಾ ಕ್ಯಾರಮ್ ಆಡುತ್ತಿದ್ದೆವು. ಅವರು ಬಹಳ ಶ್ರದ್ಧಾ ಹಾಗೂ ಶಿಸ್ತಿನಿಂದ ಜೀವನ ನಡೆಸುತ್ತಿದ್ದವರು. ಪರಿಪೂರ್ಣ ವ್ಯಕ್ತಿತ್ವದ ಮಾದರಿ,” ಎಂದು ಸುಮಲತಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಚಿತ್ರರಂಗ ಹಾಗೂ ಅಭಿಮಾನಿಗಳ ಹೃದಯದಲ್ಲಿ ಶನ್ವಾಜ್ ಅವರು ಅಮರರಾಗಿದ್ದು, ಅವರ ಕೊಡುಗೆ ಸದಾ ನೆನಪಾಗಿರಲಿದೆ.

Continue Reading

ಸಿನಿಮಾ

ಆಗಸ್ಟ್ 14ರಂದು ಬಾಕ್ಸ್ ಆಫೀಸ್‌ನಲ್ಲಿ ಧಮಾಕಾ! ಹೃತಿಕ್-ತಾರಕ್‌ರ ವಾರ್ 2 ವಿರುದ್ಧ ರಜನೀಕಾಂತ್‌ರ ಕೂಲಿ ಕ್ಲ್ಯಾಶ್

ಬೆಂಗಳೂರು:
ಬಾಕ್ಸ್ ಆಫೀಸ್‌ನಲ್ಲಿ ಆಗಸ್ಟ್ 14ಕ್ಕೆ ಅಸಲಿ ಯುದ್ಧವಿದೆ! ಏಕೆಂದರೆ, ಜೂನಿಯರ್ ಎನ್‌ಟಿಆರ್ ಮತ್ತು ಹೃತಿಕ್ ರೋಷನ್ ಅಭಿನಯದ ವಾರ್ 2 ಹಾಗೂ ತಲೈವಾ ರಜನೀಕಾಂತ್ ನಟನೆಯ ಮಲ್ಟಿಸ್ಟಾರರ್ ಕೂಲಿ ಒಂದು ದಿನವೇ ರಿಲೀಸ್ ಆಗಲಿದ್ದು, ಪ್ರೇಕ್ಷಕರ ಗಮನ ಸೆಳೆಯಲು ಎರಡೂ ಚಿತ್ರಗಳು ಸಜ್ಜಾಗಿವೆ.

ಒಂದೆಡೆಯಿಂದ ಯಶ್ ರಾಜ್ ಫಿಲಂಸ್‌ನ ಸ್ಪೈ ಯೂನಿವರ್ಸ್‌ನ ಎಕ್ಸ್‌ಟ್ರಾ ಆ್ಯಕ್ಷನ್‌ನೊಂದಿಗೆ ವಾರ್-2, ಇನ್ನೊಂದೆಡೆಯಿಂದ ರಜನಿಕಾಂತ್, ಆಮೀರ್ ಖಾನ್, ಉಪೇಂದ್ರ ಮತ್ತು ನಾಗಾರ್ಜುನ ಅವರ ಅಭಿನಯದ ಹೈಬಜ್‌ ಸಿನಿಮಾ ಕೂಲಿ — ಇವೆರಡೂ ಚಿತ್ರಗಳು ಧೂಮ್ರಪಾನದಂತೆ ಬಾಕ್ಸ್ ಆಫೀಸ್‌ನಲ್ಲಿ ಹೊತ್ತಿಕೊಳ್ಳಲಿವೆ.

ವಾರ್ 2 ವಿಶೇಷತೆ:

  • ಹೃತಿಕ್ ರೋಷನ್ – ಜೂ. ಎನ್‌ಟಿಆರ್ ಕಾಂಬಿನೇಷನ್
  • 6500+ ಸ್ಕ್ರೀನ್ಸ್‌ನಲ್ಲಿ ರಿಲೀಸ್
  • ₹90 ಕೋಟಿ ರೇಟಿಗೆ ಡಿಸ್ಟ್ರಿಬ್ಯೂಷನ್ ರೈಟ್ಸ್ ಮಾರಾಟ
  • ಪೇಟ್ರಿಯಾಟಿಕ್ ಆಕ್ಷನ್, ಕಿಯಾರಾ-ಹೃತಿಕ್ ಹಾಟ್ ಸಾಂಗ್

ಕೂಲಿ ಹೈಲೈಟ್ಸ್:

  • ರಜನೀಕಾಂತ್ ಜೊತೆ ಮಲ್ಟಿಸ್ಟಾರರ್ ಕಲಾವಿದರು
  • 700+ ಸ್ಕ್ರೀನ್ಸ್‌ನಲ್ಲಿ ವರ್ಲ್ಡ್‌ವೈಡ್ ರಿಲೀಸ್
  • ಸನ್ ಪಿಕ್ಚರ್ಸ್ ದಿಗ್ಗಜ ಬ್ಯಾನರ್
  • ಟ್ರೈಲರ್‌ನಲ್ಲಿ ಕೆಲವು ಮಿಶ್ರ ಪ್ರತಿಕ್ರಿಯೆಗಳು

ಯುದ್ಧದ ಫಲಿತಾಂಶ?
ಇದು ಕೇವಲ ಹೃತಿಕ್ ಮತ್ತು ತಾರಕ್ ನಡುವಿನ ವಾರ್ ಅಲ್ಲ, ಇದು ಬಾಕ್ಸ್ ಆಫೀಸ್‌ನಲ್ಲಿ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಕಾದು ನೋಡುತ್ತಿರುವ “ಬಿಗ್ ಕ್ಲ್ಯಾಶ್”. ತಲೈವಾ ರಜನೀಕಾಂತ್‌ರ ವರ್ಚಸ್ಸು ಹಾಗೂ ವಾರ್-2ನ ಹೈಪ್ನ ನಡುವಿನ ಸ್ಪರ್ಧೆ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುವಲ್ಲಿ ನಿರ್ಧಾರಕವಾಗಲಿದೆ.

Continue Reading

ಬೆಂಗಳೂರು

ಸು ಫ್ರಮ್ ಸೋ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಸೆನ್ಸೇಷನ್: ಶ್ರಾವಣದ ಹಬ್ಬಕ್ಕೂ ಮುನ್ನ ಧನಲಕ್ಷ್ಮೀ ವರ!

ಬೆಂಗಳೂರು: ಶ್ರಾವಣ ತಿಂಗಳು ಅಂದ್ರೆ ಬಂಗಾರದ ತಿಂಗಳು. ಮನೆಮಾಲೀಕರಿಗೆ ವರಮಹಾಲಕ್ಷ್ಮೀ ಹಬ್ಬ, ಕನ್ನಡ ಚಿತ್ರರಂಗಕ್ಕೆ “ಸು ಫ್ರಮ್ ಸೋ” ಚಿತ್ರದ ಯಶಸ್ಸು! ರಾಜ್ ಬಿ.ಶೆಟ್ಟಿ ಅಭಿನಯದ ಈ ಹಾರರ್-ಕಾಮಿಡಿ ಸಿನಿಮಾ ಇದೀಗ ಮೂರನೇ ವಾರದಲ್ಲೂ ಭರ್ಜರಿಯಾಗಿ ಓಡುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹವಾ ಸೃಷ್ಟಿಸಿದೆ.

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಉತ್ತಮ ಕಂಟೆಂಟ್ ಹೊಂದಿರುವ ಸಿನಿಮಾಗಳಿಗೆ ಅಭಿಮಾನಿಗಳ ಮೆಚ್ಚುಗೆ ಹೆಚ್ಚಾಗುತ್ತಿದೆ. ‘ಎಕ್ಕ’, ‘ಜೂನಿಯರ್’ ನಂತರ ‘ಸು ಫ್ರಮ್ ಸೋ’ ಕೂಡ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
75 ಲಕ್ಷ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಈಗಾಗಲೇ ₹25 ಕೋಟಿ ಕಲೆಕ್ಷನ್ ಮಾಡಿದ್ದು, ಶೀಘ್ರದಲ್ಲೇ ₹50 ಕೋಟಿ ಕ್ಲಬ್ ಸೇರುವ ಲಕ್ಷಣವಿದೆ.

ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್, ಕೇರಳ ಹಾಗೂ ವಿದೇಶಗಳಲ್ಲೂ ರಿಲೀಸ್ ಆದ ಈ ಸಿನಿಮಾ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಪಡೆಯುತ್ತಿದೆ. ರಾಜ್ ಬಿ.ಶೆಟ್ಟಿ ಹಾಗೂ ನಿರ್ದೇಶಕ ಜೆ.ಪಿ. ತುಮಿನಾಡ್ ಅವರ ಶ್ರದ್ಧೆ ಫಲ ನೀಡಿದ್ದು, “ಬಂದರೋ ಬಂದರು.. ಬಾವ ಬಂದರು” ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ.

ಇನ್ನು ಮಲಯಾಳಂ ಡಬ್ಬಿಂಗ್ ಆಗಿ ಆಗಸ್ಟ್ 1ರಂದು ಬಿಡುಗಡೆಗೊಂಡ ‘ಸು ಫ್ರಮ್ ಸೋ’ ಚಿತ್ರ, ಕೊಚ್ಚಿಯಲ್ಲಿ ಒಂದೇ ದಿನ 8 ಸಾವಿರ ಟಿಕೆಟ್ ಮಾರಾಟ ಮಾಡಿದ ದಾಖಲೆ ಸ್ಥಾಪಿಸಿದೆ. ಆದುದರಿಂದ, ಚಿತ್ರದ ಬಯೋಪಿಕ್ ಮತ್ತಷ್ಟು ಭಾಷೆಗಳಿಗೆ ವಿಸ್ತರಿಸುವ ಸಾಧ್ಯತೆ ಇದೆ.

Continue Reading

Trending