ರಾಜ್ಯ
ಮೈಸೂರು ದಸರಾ ಜಂಬೂಸವಾರಿಗೆ ಚಾಲನೆ – ಚಿನ್ನದ ಅಂಬಾರಿ ಹೊತ್ತು ರಾಜಗಾಂಭೀರ್ಯದಿಂದ ಸಾಗಿದ ಅಭಿಮನ್ಯು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಗೆ ಇಂದು ಚಾಲನೆ ನೀಡಲಾಯಿತು. ಅಲಂಕೃತಗೊಂಡ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ನಾಡ ಅಧಿದೇವತೆ ಚಾಮುಂಡಿತಾಯಿಯನ್ನು ಹೊತ್ತು ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ. ದಸರಾ ಜಂಬೂಸವಾರಿ ವೈಭವವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಐತಿಹಾಸಿಕ ದಸರಾ ವೈಭವ ಕಳೆಗಟ್ಟಿತ್ತು. ಅರಮನೆಯಲ್ಲಿ ರಾಜವೈಭೋಗ ಮರುಕಳಿಸಿತ್ತು. ಮಂಗಳವಾರ ಸಂಜೆ 4.40 ರಿಂದ 5 ಗಂಟೆಯ ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ದಸರಾ ಜಂಬೂಸವಾರಿ ಮೆರವಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಅರಮನೆ ಅಂಗಳದಲ್ಲಿ ಅಂಬಾರಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿದರು. ಈ ವೇಳೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ಮೇಯರ್ ಶಿವಕುಮಾರ್ ಅಂಬಾರಿಗೆ ಪುಷ್ಪಾರ್ಚನೆ ಮಾಡಿ ಸಿಎಂಗೆ ಸಾಥ್ ನೀಡಿದರು.
ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡಿ ರಾಷ್ಟ್ರಗೀತೆ ನುಡಿಸುವ ವೇಳೆ 21 ಕುಶಾಲತೋಪು ಸಿಡಿಸಲಾಯಿತು. ರಾಷ್ಟ್ರಗೀತೆ ವೇಳೆ ಜನರು ಎದ್ದು ನಿಂತು ಗೌರವ ಸಲ್ಲಿಸಿದರು. ಅಲ್ಲದೇ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ಚಾಮುಂಡಿತಾಯಿಯನ್ನು ಕಣ್ತುಂಬಿಕೊಂಡು ಜನರು ಧನ್ಯತಾ ಭಾವ ಮೆರೆದರು. ದಸರಾ ಜಂಬೂಸವಾರಿ ವೀಕ್ಷಿಸಲು ಅರಮನೆ ಅಂಗಳದಲ್ಲಿ 30 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ದಸರಾ ಮೆರವಣಿಗೆಯಲ್ಲಿ ನಿಶಾನೆ ಆನೆಯಾಗಿ ಅರ್ಜುನ ಹೆಜ್ಜೆ ಹಾಕಿದ. ನೌಫತ್ ಮತ್ತು ಸಾಲಾನೆಗಳಾಗಿ ಭೀಮ, ಗೋಪಿ, ಧನಂಜಯ, ಮಹೇಂದ್ರ, ಪ್ರಶಾಂತ್ ಆನೆಗಳು ಸಾಗಿದವು. ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯು ಜೊತೆ ಕುಮ್ಕಿ ಆನೆಗಳಾಗಿ ವಿಜಯಾ, ವರಲಕ್ಷ್ಮಿ ಸಾಗಿದವು.
ದಸರಾ ಜಂಬೂಸವಾರಿಗೆ ಸ್ತಬ್ಧಚಿತ್ರ ಹಾಗೂ ವಿವಿಧ ಕಲಾತಂಡಗಳು ಮೆರುಗು ನೀಡಿದವು. ರಾಜ್ಯದ ವಿವಿಧ ಜಿಲ್ಲೆಗಳ 31 ಹಾಗೂ ವಿವಿಧ ಇಲಾಖೆಗಳ 18 ಸೇರಿದಂತೆ ಒಟ್ಟು 49 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿವೆ. ಇಸ್ರೋ ಯಶಸ್ವಿ ಚಂದ್ರಯಾನ-3 ಯೋಜನೆಗೆ ಸಂಬಂಧಿಸಿದ ಸ್ತಬ್ಧಚಿತ್ರ ಗಮನ ಸೆಳೆಯಿತು. ಅಲ್ಲದೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತ ಸ್ತಬ್ಧಚಿತ್ರ ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿತ್ತು. ಜೊತೆಗೆ ಡೊಳ್ಳು ಕುಣಿತ, ವೀರಗಾಸೆ, ಪಟ ಕುಣಿತ ಹೀಗೆ ಅನೇಕ ಜನಪದ ಕಲಾತಂಡಗಳು ಮೆರವಣಿಗೆ ಉದ್ದಕ್ಕೂ ಸಾಗಿ ಜನರನ್ನು ರಂಜಿಸಿದವು.
ಇದಕ್ಕೂ ಮುನ್ನ ಮಧ್ಯಾಹ್ನ 1:46 ರಿಂದ 2:08 ರ ವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಧ್ವಜ ಪೂಜೆ ನೆರವೇರಿಸಲಾಯಿತು. ಅರಮನೆ ಬಲರಾಮ ದ್ವಾರಕ್ಕೆ ಐರಾವತ ಬಸ್‌ನಲ್ಲಿ ಆಗಮಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಂದಿಧ್ವಜ ಪೂಜೆ ನೆರವೇರಿಸಿದರು. ಪೂಜೆ ಬಳಿಕ ಸಿಎಂ ಹಾಗೂ ಡಿಸಿಎಂಗೆ ಕಲಾವಿದ ರಾಜೇಶ್ ವಿಶೇಷ ಗಿಫ್ಟ್ ನೀಡಿದರು. ಸಿಎಂಗೆ 3ಡಿ ಪಂಚಲೋಹದ ರಾಕೇಶ್ ಸಿದ್ದರಾಮಯ್ಯ ಭಾವಚಿತ್ರ ಹಾಗೂ ಡಿಸಿಎಂಗೆ ತಂದೆ ಕೆಂಪೇಗೌಡರ ಭಾವಚಿತ್ರ ಉಡುಗೊರೆ ನೀಡಲಾಯಿತು. ನಂದಿಧ್ವಜ ಪೂಜೆ ಬಳಿಕ ಸ್ತಬ್ಧಚಿತ್ರ ಹಾಗೂ ಕಲಾತಂಡಗಳ ಮೆರವಣಿಗೆಗೆ ಸಿಎಂ ಚಾಲನೆ ನೀಡಿದರು.
ರಾಜಕೀಯ
ಮಾಜಿ ಡಿಸಿಎಂ ಈಶ್ವರಪ್ಪ ಮತ್ತೆ ಭಾರೀ ವಾಗ್ದಾಳಿ: ಯಡಿಯೂರಪ್ಪ ಕುಟುಂಬ, ಬಿಜೆಪಿಗೆ ತೀವ್ರ ಕಿಡಿ

ಬಳ್ಳಾರಿ:
ಬಿಜೆಪಿಯಿಂದ ಉಚ್ಚಾಟನೆಯಾದ ನಂತರ ಸೈಲೆಂಟ್ ಆಗಿದ್ದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಇದೀಗ ಮತ್ತೆ ಸುದ್ದಿಯಲ್ಲಿ ಮೂಡಿದ್ದಾರೆ. ಬಳ್ಳಾರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನನ್ನದು ಭಾರತೀಯ ಬಿಜೆಪಿಯ ಟೀಮ್, ಯಾವುದೇ ಗುಂಪಿನೊಂದಿಗೆ ನಾನು ಹೋಗುವುದಿಲ್ಲ. ಆದರೆ ಬಿಜೆಪಿ ಶುದ್ಧೀಕರಣಗೊಳ್ಳಬೇಕು ಎಂಬುದು ಎಲ್ಲರ ಅಭಿಪ್ರಾಯ. ಅದು ನನ್ನದು ಸಹ ಆಗಿದೆ,” ಎಂದು ಪರೋಕ್ಷವಾಗಿ ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈಶ್ವರಪ್ಪನ ಈ ಹೇಳಿಕೆ ಕೇಸರಿಪಾಳ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಅನೇಕ ನಾಯಕರು ಈಶ್ವರಪ್ಪನ ನೇರ ಭಾಷೆಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಯಡಿಯೂರಪ್ಪನ ಕುಟುಂಬದ ಮದುವೆಯಲ್ಲಿ ಭಾಗವಹಿಸಿದ ಈಶ್ವರಪ್ಪ:
ಇತ್ತೀಚೆಗೆ ಈಶ್ವರಪ್ಪ ಯಡಿಯೂರಪ್ಪನ ಮೊಮ್ಮಗನ ಮದುವೆಯಲ್ಲಿ ಭಾಗವಹಿಸಿ ಎಲ್ಲರಿಗೂ ಆಶ್ಚರ್ಯ ತಂದಿದ್ದರು. ಈ ಘಟನೆಯ ಬಳಿಕ ಅವರು ಮತ್ತೆ ಪಕ್ಷದ ಪರ ನಿಂತು ಮಾತನಾಡಿದ್ದಾರೆ.
ಎಫ್‌ಐಆರ್ ದಾಖಲು:
ಇದಕ್ಕೂ ಮಿಕ್ಕಿ, ಮಾಜಿ ಡಿಸಿಎಂ ಈಶ್ವರಪ್ಪ ಪುತ್ರ ಕಾಂತೇಶ್ ಮತ್ತು ಸೊಸೆ ಶಾಲಿನಿ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದೆ. ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ಕೇಸ್ ದಾಖಲಾಗಿದೆ.
ಅದಕ್ಕೂ ಹಿಂದಿನ ಘಟನೆಗಳು:
ಈ ಪ್ರಕರಣ ಸಂಬಂಧ ಕಳೆದ ಏಪ್ರಿಲ್‌ನಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಲೋಕಾಯುಕ್ತರಿಗೆ ವರದಿ ಸಲ್ಲಿಸಲು ಸೂಚಿಸಿತ್ತು. ಇದೀಗ ಖಾಸಗಿ ವಕೀಲ ವಿನೋದ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ರಾಜಕೀಯ
ಮತಗಳ್ಳತನದ ದಾಖಲೆ ಬಿಡುಗಡೆಗೆ ರಾಹುಲ್ ಗಾಂಧಿ ಸಜ್ಜು: ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

ಬೆಂಗಳೂರು: ಕಾಂಗ್ರೆಸ್ ಯಾವತ್ತೂ “ಹಿಟ್ ಅಂಡ್ ರನ್” ರಾಜಕೀಯ ಮಾಡಲ್ಲ, ಎಲ್ಲದಕ್ಕೂ ದಾಖಲಾತಿಗಳಿವೆ. ಕರ್ನಾಟಕದಲ್ಲಿ ನಡೆದ ಮತಗಳ್ಳತನದ ಬಗ್ಗೆ ದಾಖಲೆಗಳನ್ನು ರಾಹುಲ್ ಗಾಂಧಿ ಬಹಿರಂಗಪಡಿಸುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, “ಇಂದು ದೆಹಲಿಯಲ್ಲಿ ರಾಹುಲ್ ಗಾಂಧಿ ಸುದ್ದಿಗೋಷ್ಠಿ ಮೂಲಕ ಮತಗಳ್ಳತನದ ದಾಖಲೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಆ.8 ರಂದು ಇದೇ ಕುರಿತು ಕರ್ನಾಟಕದಲ್ಲಿಯೂ ಸಾಕ್ಷ್ಯ ಬಿಡುಗಡೆ ಮಾಡಲಾಗುತ್ತದೆ” ಎಂದು ಹೇಳಿದರು.
ಇದೊಂದು ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಚುನಾವಣಾ ಆಯೋಗ ಯಾರ ನಿಯಂತ್ರಣದಲ್ಲಿದೆ ಎಂಬುದನ್ನು ಜನತೆಯೇ ನಿರ್ಧರಿಸಬೇಕಿದೆ ಎಂದು ಅವರು ಹೇಳಿದ್ದಾರೆ.
BJP ಪ್ರತಿಕ್ರಿಯೆ ಬಗ್ಗೆ ಖರ್ಗೆ ಪ್ರತಿಸ್ಪಂದನೆ:
“ನಾವು ಆರೋಪವನ್ನೇ ಮಾಡಿಲ್ಲ. documentation ಇದೆ, ಅದನ್ನೇ ತೋರಿಸುತ್ತಿದ್ದೇವೆ. ಬಿಜೆಪಿಯವರು ಏಕೆ ಎಲ್ಲಾ ಸಂಸ್ಥೆಗಳ ವಕ್ತಾರರಂತೆ ಮಾತನಾಡುತ್ತಿದ್ದಾರೆ? ಆಯಾ ಸಂಸ್ಥೆಗಳಿಗೆ ತಮ್ಮದೇ ಆದ ವಕ್ತಾರರು ಇದ್ದಾರೆ, ಅವರು ಸ್ಪಷ್ಟನೆ ನೀಡಲಿ,” ಎಂದು ತೀವ್ರ ಟೀಕೆ ಮಾಡಿದರು.
ದೇಶ
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ರ ಅಂಜನಾದ್ರಿ ಬೆಟ್ಟ ಭೇಟಿ – ಆಂಜನೇಯ ದರ್ಶನ ಪಡೆದು ವಿಶೇಷ ಪೂಜೆ

ಕೊಪ್ಪಳ, ಆಗಸ್ಟ್ 7 – ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬುಧವಾರ ಕುಟುಂಬದ ಸದಸ್ಯರೊಂದಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ, ಶ್ರೀ ಆಂಜನೇಯ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ವಾಯುಪುತ್ರ ಹನುಮಂತನ ಜನ್ಮಸ್ಥಳವೆಂದು ಪರಿಗಣಿಸಲ್ಪಡುವ ಈ ಪವಿತ್ರ ಸ್ಥಳದಲ್ಲಿ ಅವರು 575 ಮೆಟ್ಟಿಲುಗಳನ್ನು 30 ನಿಮಿಷಗಳಲ್ಲಿ ಏರಿ ಭಕ್ತಿಯಿಂದ ದರ್ಶನ ಪಡೆದರು.
🌄 ಅಂಜನಾದ್ರಿ ಬೆಟ್ಟ – ಭಕ್ತರ ಆಸ್ಥೆಯ ಗಗನಚುಂಬಿ ಸಂಕೇತ
ಅಂಜನಾದ್ರಿ ಬೆಟ್ಟವು ಹನುಮಂತನ ಜನ್ಮಸ್ಥಳ ಎಂಬ ನಂಬಿಕೆಯಿಂದ ಹೆಸರಾಗಿದ್ದು, ಪ್ರತಿದಿನ ನೂರಾರು ಭಕ್ತರು ಇಲ್ಲಿ ಆಗಮಿಸುತ್ತಾರೆ. ಶ್ರೀ ರಾಮ, ಸೀತಾ ದೇವಿಗಳ ಮೂರ್ತಿಗಳೂ ಇಲ್ಲಿ ಪೂಜಿಸಲ್ಪಡುತ್ತವೆ. ಬೆಟ್ಟದ ಶಿಖರದಿಂದ ತುಂಗಭದ್ರಾ ನದಿಯ ನೋಟ, ಸೂರ್ಯಾಸ್ತದ ಸೌಂದರ್ಯ ಮತ್ತು ಹಂಪಿಯ ಇತಿಹಾಸದ ಅವಶೇಷಗಳು ಮನ ಮೋಹಿಸುತ್ತವೆ.
🛕 ಅಂಜನಾದ್ರಿ ಬೆಟ್ಟದ ಪ್ರಮುಖ ಅಂಶಗಳು:
- 575 ಮೆಟ್ಟಿಲುಗಳನ್ನು ಏರಿ ಸ್ವಾಮಿದರ್ಶನ
- ರಾಜ್ಯಪಾಲರಿಗೆ ಜಿಲ್ಲಾಡಳಿತದಿಂದ ಸನ್ಮಾನ
- ದೇವಾಲಯದ ಆಂತರಿಕ ಶ್ರದ್ಧಾ ಭರವಸೆಯ ಸ್ಥಳ
- ಹಂಪಿಯಿಂದ ನದಿ ದಾಟಿ ಬೋಟ್ ಮೂಲಕ ಪ್ರವೇಶದ ಅನುಕೂಲ
- ರೈಲು ಮಾರ್ಗ: ಕೊಪ್ಪಳ ಅಥವಾ ಮುನಿರಾಬಾದ್ ಮೂಲಕ
- ರಸ್ತೆ ಸಂಪರ್ಕ ಉತ್ತಮ, ವಿಮಾನ ಸಂಪರ್ಕ ಇಲ್ಲ
📜 ಅಂಜನಾದ್ರಿ ಅಭಿವೃದ್ಧಿಯ ಬಗ್ಗೆ ಸರ್ಕಾರದ ದೃಷ್ಟಿಕೋನ
ಹನುಮ ಮಾಲೆ ಸಂದರ್ಭದಲ್ಲಿ ಸಾವಿರಾರು ಭಕ್ತರು ಇಲ್ಲಿ ಆಗಮಿಸುತ್ತಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ವಾಗ್ದಾನ ನೀಡಿದ್ದರು. ರಾಜ್ಯ ಸರಕಾರ ಕೂಡ ಈ ಸ್ಥಳವೇ ಆಂಜನೇಯನ ಜನ್ಮಭೂಮಿ ಎಂದು ಧರ್ಮಗ್ರಂಥಗಳ ಆಧಾರದ ಮೇಲೆ ದೃಢಪಡಿಸಿದೆ.
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು9 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ