ರಾಜ್ಯ
ಜೀವನದಲ್ಲಿ ಯಶಸ್ಸು ಸಾಧಿಸಲು ವಿದ್ಯಾರ್ಥಿಗಳು ಸಂಶೋಧನೆ ಮತ್ತು ಆವಿಷ್ಕಾರಗಳತ್ತ ಗಮನ ನೀಡಬೇಕು ಪ್ರೊ ಟಿ ಜಿ ಸೀತಾರಾಮ್

ಮೈಸೂರು: ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯೆಡೆ ದೇಶದ ಗಮನವನ್ನು ಕೇಂದ್ರೀಕರಿಸುವಲ್ಲಿ ತಾಂತ್ರಿಕ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಎಐಸಿಟಿಇ ಅಧ್ಯಕ್ಷ ಪ್ರೊ ಟಿ ಜಿ ಸೀತಾರಾಮ್ ಹೇಳಿದರು, ಮೈಸೂರಿನ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಇಂಡಿಯನ್ ಜಿಯೋಟೆಕ್ನಿಕಲ್ ಸೊಸೈಟಿ (ಐಜಿಎಸ್) ಒಂದು ದಿನದ ರಾಷ್ಟ್ರೀಯ ಸಮ್ಮೇಳನ “ಕರ್ನಾಟಕ ಜಿಯೋಟೆಕ್ನಿಕಲ್ ಫ್ಯೂಷನ್- ೨೦೨೩ರ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು, ಈ ಸಂದರ್ಭದಲ್ಲಿ ಅವರು ಮಾತನಾಡುತ್ತ ಮೈಸೂರಿನ ಒಡೆಯರ್ ಹಾಗೂ ಅವರ ಕುಟುಂಬ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಕೈಗಾರಿಕೀಕರಣಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು, ಕೇವಲ ಜ್ಞಾನವು ಸಾಕಾಗುವುದಿಲ್ಲ, ಕೌಶಲ್ಯಗಳು ಬಹಳ ಮುಖ್ಯ ಮತ್ತು ಭಾರತವು ಮುಂಬರುವ ದಿನಗಳಲ್ಲಿ ೫೦೦ ಮಿಲಿಯನ್ ಯುವಜನರ ಕೌಶಲ್ಯ ಅಭಿವೃದ್ಧಿಯತ್ತ ಗಮನಹರಿಸುತ್ತಿದೆ ಮತ್ತು ಜಾಗತಿಕ ಪ್ರಪಂಚದಲ್ಲಿ ಪ್ರಸ್ತುತವಾಗಿರಲು ಕೌಶಲ್ಯವನ್ನು (ಅಪ್ ಸ್ಕಿಲ್ ಮತ್ತು ರಿ ಸ್ಕಿಲ್ ) ಹೆಚ್ಚಿಸಿ ಕೊಳ್ಳಲು ಅವರು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರನ್ನು ಕೇಳಿಕೊಂಡರು, ಸಂಶೋಧನಾ ಪ್ರಬಂಧಗಳು, ದೇಶದಲ್ಲಿ ಉತ್ಪಾದಿಸಲಾದ ಪಿಎಚ್‌ಡಿಗಳ ಸಂಖ್ಯೆ ಮತ್ತು ಬೌದ್ಧಿಕ ಆಸ್ತಿಯಲ್ಲಿ (ಪೇಟೆಂಟ್ ಫೈಲಿಂಗ್) ಭಾರತವು ಅಗ್ರ ೫ ದೇಶಗಳ ಪಟ್ಟಿಯಲ್ಲಿ ಬರುತ್ತದೆ. ೧೧೦ ಕ್ಕೂ ಹೆಚ್ಚು ಯುನಿಕಾರ್ನ್ಗಳನ್ನು ಹೊಂದಿರುವ ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ಭಾರತವು ಮೂರನೇ ಸ್ಥಾನ ಗಳಿಸಿದೆ ಎಂದರು, ಭಾರತವು ೩೬೦೦ ಕ್ಕೂ ಹೆಚ್ಚು ಎಂಜಿನಿಯರಿ೦ಗ್ ಕಾಲೇಜುಗಳನ್ನು ಹೊಂದಿದ್ದು, ಪ್ರತಿ ವರ್ಷ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಎಂಜಿನಿಯರ್‌ಗಳು ಹೊರಬರುತ್ತಾರೆ.
ಇದೇ ಸಂದರ್ಭದಲ್ಲಿ ಇಸ್ರೋ ವಿಜ್ಞಾನಿಗಳ ಯಶಸ್ಸನ್ನು ಶ್ಲಾಘಿಸಿದರು ಮತ್ತು ಇಸ್ರೋ ಅಧ್ಯಕ್ಷರು ಸೇರಿದಂತೆ ಹೆಚ್ಚಿನವರು ಎಐಸಿಟಿಇ ಅನುಮೋದಿತ ಎಂಜಿನಿಯರಿAಗ್ ಕಾಲೇಜುಗಳಲ್ಲಿ ಅಧ್ಯಯನ ಮಾಡಿದ ಸಣ್ಣ ನಗರಗಳಿಂದ ಬಂದವರು ಎಂದು ಹೇಳಿದರು, ಭಾರತದ ಗ್ರಾಮೀಣ ಭಾಗಗಳಿಂದ ಪ್ರತಿಭೆಯನ್ನು ಹೊರತರುವ ಸಲುವಾಗಿ ಮಾತೃಭಾಷೆಯಲ್ಲಿ ಜ್ಞಾನವನ್ನು ನೀಡುವ ಮೂಲಕ ಎಐಸಿಟಿಯು ದೊಡ್ಡ ಹೆಜ್ಜೆ ಇಟ್ಟಿದೆ, ಐಡಿಯಾ ಲ್ಯಾಬ್, ಪರಿಸರ ವ್ಯವಸ್ಥೆ ಮತ್ತು ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಮೂಲಕ ಭಾರತವು ಅಮೃತ ಗಳಿಗೆಯನ್ನು ನೋಡುತ್ತಿದೆ ಎಂದರು, ಐಜಿಎಸ್ ಅಧ್ಯಕ್ಷ ಡಾ. ಅನಿಲ್ ಜೋಸೆಫ್ ಅವರ ಐಜಿಎಸ್ ನಾ ೭೫ ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ ಸಿವಿಲ್ ಇಂಜಿನಿಯರಿAಗ್ ವಿದ್ಯಾರ್ಥಿಗಳನ್ನು ಕುರಿತು ಪ್ರಾಯೋಗಿಕ ಕ್ಷೇತ್ರಗಳಲ್ಲಿ ಹೆಚ್ಚು ಪರಿಣಿತಿ ಪಡೆದು, ಐಟಿ ಕಂಪನಿಗಳಲ್ಲಿ ಕೆಲಸಕ್ಕೆ ಕೆಲಸ ಹುಡುಕುವುದಕ್ಕಿಂತ, ಕೋರ್ ಎಂಜಿನಿಯರಿAಗ್‌ನಲ್ಲಿ ಉಳಿಯುವಂತೆ ಹೇಳಿದರು. ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯಂತಹ ತಂತ್ರಜ್ಞಾನವನ್ನು ಕಲಿತು ಸಿವಿಲ್ ಇಂಜಿನಿಯರಿAಗ್ ಕ್ಷೇತ್ರದಲ್ಲಿ ಆಳವಡಿಸಬೇಕೆಂದು ತಿಳಿಸಿದರು, ಕಾರ್ಯಕ್ರಮದಲ್ಲಿ ಐಜಿಎಸ್ ಕಾರ್ಯದರ್ಶಿ ಡಾ.ಎ.ಪಿ.ಸಿಂಗ್, ಐಜಿಎಸ್ ಬೆಂಗಳೂರು ವಿಭಾಗದ ಮುಖ್ಯಸ್ಥೆ ಡಾ.ಮಾಧವಿ ಲತಾ, ಹುಬ್ಬಳ್ಳಿ ಚಾಪ್ಟರ್ ಮುಖ್ಯಸ್ಥ ಡಾ.ಎಸ್.ಎಸ್. ಖಾದ್ರಿ, ಮೈಸೂರು ವಿಭಾಗದ ಅಧ್ಯಕ್ಷ ಡಾ.ಎಸ್.ಕೆ.ಪ್ರಸಾದ್, ಸುರತ್ಕಲ್ ವಿಭಾಗದ ಅಧ್ಯಕ್ಷ ಡಾ.ಶ್ರೀವಲ್ಸ ಕೊಳತ್ತಾಯರು, ವಿದ್ಯಾವರ್ಧಕ ಇಂಜಿನಿಯರಿAಗ್ ಕಾಲೇಜಿನಾ ಡಾ.ಬಿ.ಸದಾಶಿವೇಗೌಡ, ಪಿ.ವಿಶ್ವನಾಥ್, ಗುಂಡಪ್ಪಗೌಡ, ಶ್ರೀಶೈಲ ರಾಮಣ್ಣನವರ್ ಉಪಸ್ಥಿತರಿದ್ದರು.
ರಾಜಕೀಯ
DK Shivakumar ಸಿಎಂ ಆಗಬೇಕು: ರಾಮನಗರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಪರೋಕ್ಷ ಆಗ್ರಹ
ರಾಮನಗರ:
ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಸಿಎಂ ಸ್ಥಾನ ಸಿಗಬೇಕು ಎಂಬ ಆಗ್ರಹವನ್ನು ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “DK Shivakumar ನಮ್ಮ ನಾಯಕರು. ಅವರ ಶ್ರಮ ಹಾಗೂ ಹೋರಾಟಕ್ಕೆ ಪ್ರತಿಫಲ ಸಿಗಬೇಕು. ನಾನು ಈ ಜಿಲ್ಲೆಯಲ್ಲಿ ಹುಟ್ಟಿದ್ದು, ಅವರು ಕೂಡ ನಮ್ಮ ಜನರು. ಅವರಿಗೆ ಗೌರವ ಸಿಗಬೇಕು ಎಂದು ಹೇಳುವುದು ನನ್ನ ಹಕ್ಕು,” ಎಂದು ಸ್ಪಷ್ಟಪಡಿಸಿದರು.
“ನಾನು ಈಗಲೂ ನನ್ನ ಹಿಂದಿನ ಹೇಳಿಕೆಗೆ ಬದ್ಧನಾಗಿದ್ದೇನೆ. DK Shivakumar ಸಿಎಂ ಆಗಬೇಕು ಎಂಬ ಮಾತು ಹಿಂದೆ ಹೇಳಿದ್ದೆ, ಈಗಲೂ ನಿಂತಿದ್ದೇನೆ,” ಎಂದರು.
ಆ.8ರಂದು ಕಾಂಗ್ರೆಸ್ ಹೋರಾಟ:
ಆಗಸ್ಟ್ 8ರಂದು ನಡೆಯಲಿರುವ ಚುನಾವಣಾ ಅಕ್ರಮದ ವಿರುದ್ಧದ ಕಾಂಗ್ರೆಸ್ ಹೋರಾಟ ಕುರಿತು ಮಾತನಾಡಿದ ಅವರು, “ಈ ಹೋರಾಟಕ್ಕೆ ಹೈಕಮಾಂಡ್ ರೂಪುರೇಷೆ ನೀಡಿದೆ. ರಾಷ್ಟ್ರೀಯ ನಾಯಕರು ನೇತೃತ್ವ ವಹಿಸುತ್ತಿದ್ದಾರೆ. ನಮ್ಮ ಜಿಲ್ಲೆಯಿಂದ 20,000 ಮಂದಿ ಪಾಲ್ಗೊಳ್ಳುತ್ತಾರೆ,” ಎಂದು ಹೇಳಿದರು.
ಇವಿಎಂ ಅಕ್ರಮ ಕುರಿತು ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲವಾದರೂ, “ನಮ್ಮ ರಾಷ್ಟ್ರ ನಾಯಕರು ಎಲ್ಲಾ ವಿವರಗಳನ್ನು ಬಹಿರಂಗಪಡಿಸುತ್ತಾರೆ,” ಎಂದು ತಿಳಿಸಿದರು.
ಬೆಂಗಳೂರು
ಅಲ್ಪಸಂಖ್ಯಾತರ ಸಾಮೂಹಿಕ ವಿವಾಹಕ್ಕೆ ₹50,000 ಸಹಾಯಧನ: ಜಮೀರ್ ಅಹ್ಮದ್ ಘೋಷಣೆ
ಬೆಂಗಳೂರು:
ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದ ಸಾಮೂಹಿಕ ವಿವಾಹಗಳಿಗೆ ಇನ್ಮುಂದೆ ಸರ್ಕಾರದಿಂದ ₹50,000 ಸಹಾಯಧನ ಸಿಗಲಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಘೋಷಿಸಿರುವ ಬಜೆಟ್ ಯೋಜನೆಗೆ ಈಗ ಅನುಮೋದನೆ ಲಭಿಸಿದ್ದು, ಈ ನಿಟ್ಟಿನಲ್ಲಿ ಬಡ ಅಲ್ಪಸಂಖ್ಯಾತರಿಗೆ ಸಹಾಯ ಮಾಡಲು ಸರ್ಕಾರ ಸಜ್ಜಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು:
ಮೌಲಾನಾ ಅಬ್ದುಲ್ ಕಲಾಂ ಸ್ಕೂಲ್ ಸೇರಿದಂತೆ ಪ್ರತಿಭಾವಂತ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಗುತ್ತಿದೆ. ಈಗಾಗಲೇ 214 ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಲ್ಯಾಪ್‌ಟಾಪ್ ವಿತರಣೆ ನಡೆಸಲಾಗಿದೆ.
ಮದರಸಾಗಳಲ್ಲಿ ಕನ್ನಡ ಕಲಿಕೆ:
ಮದರಸಾಗಳಲ್ಲಿ ಕನ್ನಡ ಕಲಿಕೆ ಆರಂಭಿಸುವ ಯೋಜನೆಯೊಂದಿಗೆ, ಮೊದಲ ಹಂತದಲ್ಲಿ 200 ಮೌಲ್ವಿಗಳನ್ನು ಆಯ್ಕೆ ಮಾಡಲಾಗಿದೆ. ಮೂವರು ತಿಂಗಳಲ್ಲಿ ಅವರಿಗೆ ಕನ್ನಡ ಭಾಷಾ ತರಬೇತಿ ನೀಡಲಾಗುವುದು.
2,000 ಮದರಸಾಗಳಿಗೆ ಕನ್ನಡ ಪಾಠ್ಯಕ್ರಮ:
ರಾಜ್ಯದಲ್ಲಿ 2 ಸಾವಿರ ಮದರಸಾಗಳಿಗೆ ಕನ್ನಡ ಕಲಿಕೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ಅಲ್ಪಸಂಖ್ಯಾತ ಆಯೋಗ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅಧ್ಯಕ್ಷ ಯು. ನಿಸಾರ್ ಅಹಮದ್ ಹೇಳಿದ್ದಾರೆ. very soon ಈ ಪಾಠ್ಯಕ್ರಮ ಮುದ್ರಣಕ್ಕೂ ಕ್ರಮ ಜರಗಲಿದೆ.
ಅಪರಾಧ
ಧರ್ಮಸ್ಥಳ ಶವ ಹೂತು ಪ್ರಕರಣ: ಮೂರು ಅಸ್ಥಿಪಂಜರ ಪತ್ತೆ, ಎಸ್‌ಐಟಿ ತನಿಖೆಗೆ ಹೊಸ ತಿರುವು!
ದಕ್ಷಿಣ ಕನ್ನಡ, ಆಗಸ್ಟ್ 5 – ಧರ್ಮಸ್ಥಳದ ಸುತ್ತಮುತ್ತಲ ಶವ ಹೂತು ಪ್ರಕರಣಕ್ಕೆ ದಿನೇ ದಿನೆ ನ್ಯೂ ಟ್ವಿಸ್ಟ್ ಸಿಗುತ್ತಿದ್ದು, ಇದೀಗ ಮೂರು ಅಸ್ಥಿಪಂಜರಗಳು ಪತ್ತೆಯಾಗಿವೆ ಎಂಬ ಸುದ್ದಿ ಚಕ್ಕರಿಗೊಳ್ಳುತ್ತಿದೆ. ಈ ಕುರಿತು ದೂರುದಾರ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಎಸ್‌ಐಟಿ ತಂಡದ ಶೋಧ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿನ್ನೆ ನಡೆದ ಉತ್ಖನನದ ವೇಳೆ:
- ಸ್ಟಾಟ್ ನಂಬರ್ 12ರ ಬಳಿ ಕಾರ್ಮಿಕರಿಂದ ಅಗೆಸಿದಾಗ, ಮೂರು ಅಸ್ಥಿಪಂಜರಗಳು ಹಾಗೂ ಮಹಿಳೆಯ ಸೀರೆ ಪತ್ತೆಯಾಗಿವೆ.
- ಸುಮಾರು 140 ಮೂಳೆಗಳ ತುಂಡುಗಳು ಪತ್ತೆಯಾದ ಕುರಿತು ವರದಿ ಇದೆ.
- ಅಸ್ಥಿಪಂಜರಗಳನ್ನು ತಕ್ಷಣವೇ ಕೆಎಂಸಿ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ.
ಇಂದಿನ ಉತ್ಖನನ:
- ನೇತ್ರಾವತಿ ನದಿಯ ದಡದ ಬಳಿ 11ನೇ ಪಾಯಿಂಟ್‌ನಲ್ಲಿ ಅಗೆತ ಕೆಲಸ ನಡೆಯುತ್ತಿದೆ.
- 6 ಅಡಿಯವರೆಗೆ ಶೋಧ ನಡೆದ ಬಳಿಕ ಸಾಕ್ಷ್ಯ ಸಿಕ್ಕದರೆ ಮುಂದಿನ ಪಾಯಿಂಟ್‌ಗೆ ಹೋಗುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಪೂರ್ವ ಘಟನೆ:
- ಜುಲೈ 31ರಂದು 6ನೇ ಗುರುತುಸ್ಥಳದಲ್ಲಿ ಅಸ್ಥಿಪಂಜರ ಪತ್ತೆಯಾದ ಹಿನ್ನೆಲೆ, ಎಸ್‌ಐಟಿ ಅಧಿಕಾರಿಗಳಾದ ಐಪಿಎಸ್ ಜಿತೇಂದ್ರ ಕುಮಾರ್ ದಯಾಮ ಅವರು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು, ಆಧಾರದ ಮೇಲೆ UDR ಪ್ರಕರಣ ದಾಖಲಾಗಿದೆ.
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು8 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ಕ್ರೀಡೆ2 months ago
ಇಂದು ಐಪಿಎಲ್ ಫೈನಲ್- ಆರ್ಸಿಬಿಗೆ ಶುಭಕೋರಿದ ಎಸ್ಟಿಎಸ್!