ಬೆಂಗಳೂರು
ಜರ್ಮನಿಯಲ್ಲಿ ನರ್ಸಿಂಗ್ ಉದ್ಯೋಗಾವಕಾಶ: ಶಿವಮೊಗ್ಗ ಕಾರ್ಮಿಕ ಅಧಿಕಾರಿ ಕಚೇರಿಯಲ್ಲಿ ನೋಂದಣಿಗೆ ಅವಕಾಶ – nursing jobs in Germany

- /home/u521927855/domains/hosasuddi.in/public_html/wp-content/plugins/mvp-social-buttons/mvp-social-buttons.php on line 27
https://hosasuddi.in/wp-content/uploads/2024/07/Nursing-Staff-1000x600.jpg&description=ಜರ್ಮನಿಯಲ್ಲಿ ನರ್ಸಿಂಗ್ ಉದ್ಯೋಗಾವಕಾಶ: ಶಿವಮೊಗ್ಗ ಕಾರ್ಮಿಕ ಅಧಿಕಾರಿ ಕಚೇರಿಯಲ್ಲಿ ನೋಂದಣಿಗೆ ಅವಕಾಶ – nursing jobs in Germany', 'pinterestShare', 'width=750,height=350'); return false;" title="Pin This Post">
- Share
- Tweet /home/u521927855/domains/hosasuddi.in/public_html/wp-content/plugins/mvp-social-buttons/mvp-social-buttons.php on line 72
https://hosasuddi.in/wp-content/uploads/2024/07/Nursing-Staff-1000x600.jpg&description=ಜರ್ಮನಿಯಲ್ಲಿ ನರ್ಸಿಂಗ್ ಉದ್ಯೋಗಾವಕಾಶ: ಶಿವಮೊಗ್ಗ ಕಾರ್ಮಿಕ ಅಧಿಕಾರಿ ಕಚೇರಿಯಲ್ಲಿ ನೋಂದಣಿಗೆ ಅವಕಾಶ – nursing jobs in Germany', 'pinterestShare', 'width=750,height=350'); return false;" title="Pin This Post">
ಶಿವಮೊಗ್ಗ: ಜರ್ಮನಿ ದೇಶದಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸಿ, ಅಲ್ಲಿಯೇ ಉದ್ಯೋಗ ಕಂಡುಕೊಳ್ಳುವ ಅವಕಾಶವನ್ನು ಮೇ. ಟ್ಯಾಲೆಂಟ್ ಆರಂಜ್ ಸಂಸ್ಥೆ ನೀಡಿದೆ. ಜರ್ಮನಿ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಿವಮೊಗ್ಗದಲ್ಲಿರುವ ಮೇ. ಟ್ಯಾಲೆಂಟ್ ಆರಂಜ್ ಸಂಸ್ಥೆಯು ಬಿಎಸ್ಸಿ/ ಜಿಎನ್ಎಂ ವಿದ್ಯಾರ್ಹತೆ ಹೊಂದಿರುವ ಭಾರತೀಯ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಯ್ಕೆಗೊಂಡ ಅಭ್ಯರ್ಥಿಗಳು ಜರ್ಮನಿಯಲ್ಲಿ ಉದ್ಯೋಗ ಕಲ್ಪಿಸಲು ಮುಂದಾಗಿದೆ. ಈ ಹುದ್ದೆಯಲ್ಲಿ ಆಸಕ್ತ ಅಭ್ಯರ್ಥಿಗಳು ಜಿಲ್ಲೆಯ ಕಾರ್ಮಿಕ ಅಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಮೇ. ಟ್ಯಾಲೆಂಟ್ ಆರಂಜ್ ಸಂಸ್ಥೆಯು ಕರ್ನಾಟಕ ರಾಜ್ಯದ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯನ್ನು ಸಂಪರ್ಕಿಸಿದ್ದು, ಸೂಕ್ತ ವಿದ್ಯಾರ್ಹತೆ ಹೊಂದಿರುವ ನರ್ಸಿಂಗ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಉದ್ಯೋಗಕ್ಕೆ ಆಯ್ಕೆಗೊಂಡ ಅಭ್ಯರ್ಥಿಗಳು ಜರ್ಮನಿಯಲ್ಲಿ ಸಂವಹನ ಸಮಸ್ಯೆ ಎದುರಾಗದಂತೆ ಇರಲು ಕೇರಳ ರಾಜ್ಯದ ತಿರುವನಂತಪುರದ ತರಬೇತಿ ಕೇಂದ್ರದಲ್ಲಿ 8 ತಿಂಗಳ ಕಾಲ ಜರ್ಮನ್ ಭಾಷೆಯ ಬಗ್ಗೆ ತರಬೇತಿ ನೀಡಲಿದೆ. ಈ ಸಂದರ್ಭದಲ್ಲಿ ಉಚಿತ ಊಟ, ವಸತಿ ಸೌಲಭ್ಯ ನೀಡುವುದರ ಜೊತೆ ಪ್ರಯಾಣ ವ್ಯವಸ್ಥೆಯನ್ನು ಒದಗಿಸಲಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಭಾರತೀಯ ನರ್ಸಿಂಗ್ ಲೈಸೆನ್ಸ್ ಹೊಂದಿದ್ದು, ಹೊಸಬರು/ ಅನುಭವವುಳ್ಳ 38 ವರ್ಷದೊಳಗಿನ ಮಹಿಳೆಯರು/ಪುರುಷರು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗೆ ಆಯ್ಕೆಗೊಂಡವರಲ್ಲಿ ಚಿಕ್ಕ ಮಕ್ಕಳ ಪೋಷಕರು ಅವರನ್ನು ಜರ್ಮನಿಗೆ ಕರೆದೊಯ್ಯುವ ಸೌಲಭ್ಯ ಹೊಂದಿಲ್ಲ.
ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕಾರ್ಮಿಕ ಅಧಿಕಾರಿಗಳ ಕಚೇರಿ, ಉಪವಿಭಾಗ, 2ನೇ ಮಹಡಿ, ವಾಣಿಜ್ಯ ಸಂಕೀರ್ಣ, ಸೂಡಾ ಕಾಂಪ್ಲೇಕ್ಸ್, ಪೊಲೀಸ್ ಚೌಕಿ, ವಿನೋಬನಗರ, ಶಿವಮೊಗ್ಗ. ಇಲ್ಲಿ ನೋಂದಾಯಿಸಿಕೊಳ್ಳುವಂತೆ ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ಎಂ.ಪಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ :08182-248940 ನ್ನು ಸಂಪರ್ಕಿಸಬಹುದು.
ಬೆಂಗಳೂರು
ಸು ಫ್ರಮ್ ಸೋ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕಲೆಕ್ಷನ್ ಸೆನ್ಸೇಷನ್: ಶ್ರಾವಣದ ಹಬ್ಬಕ್ಕೂ ಮುನ್ನ ಧನಲಕ್ಷ್ಮೀ ವರ!
ಬೆಂಗಳೂರು: ಶ್ರಾವಣ ತಿಂಗಳು ಅಂದ್ರೆ ಬಂಗಾರದ ತಿಂಗಳು. ಮನೆಮಾಲೀಕರಿಗೆ ವರಮಹಾಲಕ್ಷ್ಮೀ ಹಬ್ಬ, ಕನ್ನಡ ಚಿತ್ರರಂಗಕ್ಕೆ “ಸು ಫ್ರಮ್ ಸೋ” ಚಿತ್ರದ ಯಶಸ್ಸು! ರಾಜ್ ಬಿ.ಶೆಟ್ಟಿ ಅಭಿನಯದ ಈ ಹಾರರ್-ಕಾಮಿಡಿ ಸಿನಿಮಾ ಇದೀಗ ಮೂರನೇ ವಾರದಲ್ಲೂ ಭರ್ಜರಿಯಾಗಿ ಓಡುತ್ತಿದ್ದು, ಬಾಕ್ಸ್ ಆಫೀಸ್ನಲ್ಲಿ ಹವಾ ಸೃಷ್ಟಿಸಿದೆ.
ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಉತ್ತಮ ಕಂಟೆಂಟ್ ಹೊಂದಿರುವ ಸಿನಿಮಾಗಳಿಗೆ ಅಭಿಮಾನಿಗಳ ಮೆಚ್ಚುಗೆ ಹೆಚ್ಚಾಗುತ್ತಿದೆ. ‘ಎಕ್ಕ’, ‘ಜೂನಿಯರ್’ ನಂತರ ‘ಸು ಫ್ರಮ್ ಸೋ’ ಕೂಡ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
75 ಲಕ್ಷ ಬಜೆಟ್ನಲ್ಲಿ ತಯಾರಾದ ಈ ಸಿನಿಮಾ ಈಗಾಗಲೇ ₹25 ಕೋಟಿ ಕಲೆಕ್ಷನ್ ಮಾಡಿದ್ದು, ಶೀಘ್ರದಲ್ಲೇ ₹50 ಕೋಟಿ ಕ್ಲಬ್ ಸೇರುವ ಲಕ್ಷಣವಿದೆ.
ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್, ಕೇರಳ ಹಾಗೂ ವಿದೇಶಗಳಲ್ಲೂ ರಿಲೀಸ್ ಆದ ಈ ಸಿನಿಮಾ ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಪಡೆಯುತ್ತಿದೆ. ರಾಜ್ ಬಿ.ಶೆಟ್ಟಿ ಹಾಗೂ ನಿರ್ದೇಶಕ ಜೆ.ಪಿ. ತುಮಿನಾಡ್ ಅವರ ಶ್ರದ್ಧೆ ಫಲ ನೀಡಿದ್ದು, “ಬಂದರೋ ಬಂದರು.. ಬಾವ ಬಂದರು” ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ.
ಇನ್ನು ಮಲಯಾಳಂ ಡಬ್ಬಿಂಗ್ ಆಗಿ ಆಗಸ್ಟ್ 1ರಂದು ಬಿಡುಗಡೆಗೊಂಡ ‘ಸು ಫ್ರಮ್ ಸೋ’ ಚಿತ್ರ, ಕೊಚ್ಚಿಯಲ್ಲಿ ಒಂದೇ ದಿನ 8 ಸಾವಿರ ಟಿಕೆಟ್ ಮಾರಾಟ ಮಾಡಿದ ದಾಖಲೆ ಸ್ಥಾಪಿಸಿದೆ. ಆದುದರಿಂದ, ಚಿತ್ರದ ಬಯೋಪಿಕ್ ಮತ್ತಷ್ಟು ಭಾಷೆಗಳಿಗೆ ವಿಸ್ತರಿಸುವ ಸಾಧ್ಯತೆ ಇದೆ.
ಬೆಂಗಳೂರು
ವೇತನ ವಿವಾದದಲ್ಲಿ ಸಿಎಂ ಸ್ಪಷ್ಟನೆ: 14 ತಿಂಗಳ ಹಿಂಬಾಕಿಗೆ ಮಾತ್ರ ಸರ್ಕಾರ ಸಿದ್ಧ
ಬೆಂಗಳೂರು: ಸಾರಿಗೆ ನೌಕರರ 38 ತಿಂಗಳ ವೇತನ ಹಿಂಬಾಕಿ ಪಾವತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. “ಈ ಬೇಡಿಕೆ ಸಮಂಜಸವಲ್ಲ. ಸರ್ಕಾರ ಕೇವಲ 14 ತಿಂಗಳ ಹಿಂಬಾಕಿಗೆ ಸಿದ್ಧ” ಎಂದು ಅವರು ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಂಧಾನ ಸಭೆಯಲ್ಲಿ ತಿಳಿಸಿದ್ದಾರೆ.
2020ರಿಂದ 2023ರ ಫೆಬ್ರವರಿವರೆಗಿನ ಬಾಕಿ ವೇತನ ಪಾವತಿಗೆ ನೌಕರ ಸಂಘಗಳು ಒತ್ತಾಯಿಸಿದ್ದರೊಂದಿಗೆ, 2024ರಿಂದ ನೂತನ ವೇತನವನ್ನೂ ಜಾರಿಗೆ ತರುವಂತೆ ಒತ್ತಾಯಿಸಲಾಗಿದೆ. ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, “ನಿಗಮಗಳ ಆರ್ಥಿಕ ಪರಿಸ್ಥಿತಿ ಮತ್ತು ಹಿಂದಿನ ಸರ್ಕಾರದ ಆದೇಶಗಳ ದೋಷಗಳನ್ನು ಪರಿಗಣಿಸಿ 14 ತಿಂಗಳ ವೇತನ ಹಿಂಬಾಕಿಗೆ ಸಮ್ಮತಿಯಿದೆ,” ಎಂದು ಸ್ಪಷ್ಟಪಡಿಸಿದರು.
ವೇತನ ಪರಿಷ್ಕರಣೆ ಪಶ್ಚಾತ್ಪಟ
2016ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 12.5% ವೇತನ ಹೆಚ್ಚಳ ಜಾರಿಗೆ ಬಂದಿತ್ತು. ಆದರೆ 2020ರ ಕೋವಿಡ್ ಕಾರಣದಿಂದ ಆ ವೇಳೆಗೆ ಯಾವುದೇ ಪರಿಷ್ಕರಣೆ ಆಗಿರಲಿಲ್ಲ. ನಂತರದ ಕಾಂಗ್ರೆಸ್ ಸರ್ಕಾರದಲ್ಲಿ ಶ್ರೀನಿವಾಸ ಮೂರ್ತಿ ಸಮಿತಿ ಶಿಫಾರಸ್ಸಿನಂತೆ 2022ರ ಜೂನ್ 01ರಿಂದ 2023ರ ಫೆಬ್ರವರಿವರೆಗೆ ಹಿಂಬಾಕಿ ಪಾವತಿ ಮಾಡಲು ತೀರ್ಮಾನಿಸಲಾಗಿತ್ತು.
ಸರ್ಕಾರದ ಆರ್ಥಿಕ ಹೊಣೆಗಾರಿಕೆ
ಸಿದ್ದರಾಮಯ್ಯ ಅವರು ಹೇಳಿದ್ದಾರೆ: “ನಾವು ಅಧಿಕಾರಕ್ಕೆ ಬಂದಾಗ ನಿಗಮಗಳಿಗೆ ಒಟ್ಟಾರೆ ₹4000 ಕೋಟಿ ಸಾಲ ಇತ್ತು. 2018 ರಲ್ಲಿ ಈ ಮೊತ್ತ ಕೇವಲ ₹14 ಕೋಟಿ ಮಾತ್ರ ಇತ್ತು. ಯಾವುದೇ ನಿಗಮ ಲಾಭದಲ್ಲಿ ಇಲ್ಲ.” ಅಂತಹ ಪರಿಸ್ಥಿತಿಯಲ್ಲಿ ಎಲ್ಲಾ ನೌಕರರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಸಂಘದ ಚುನಾವಣೆ ಮತ್ತು ಮುಂದಿನ ಕ್ರಮ
ಸಾರಿಗೆ ನೌಕರರ ಸಂಘದ ಚುನಾವಣೆ ಹಾಗೂ ಬೇಡಿಕೆಗಳ ಕುರಿತಂತೆ ಸರ್ಕಾರ ಪರಿಶೀಲನೆ ನಡೆಸಲಿದ್ದು, ಮಾತುಕತೆ ಮೂಲಕ ಎಲ್ಲ ಅಹವಾಲುಗಳನ್ನು ಬಗೆಹರಿಸಲು ಸಿದ್ಧವಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು
ಸಾರಿಗೆ ನೌಕರರ ಮುಷ್ಕರ ಆರಂಭ: ಡಿಸಿಎಂ ಡಿ.ಕೆ.ಶಿವಕುಮಾರ್ ಮನವಿ – “ಹಠವಿಲ್ಲದೆ ಸಹಕಾರ ನೀಡಿ”
ಬೆಂಗಳೂರು: ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ಸಾರಿಗೆ ನೌಕರರು ಮುಷ್ಕರಕ್ಕೆ (Transport Employees Strike) ಇಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, “ಸಾರಿಗೆ ನೌಕರರು ಕೇಳಿರುವ ಬೇಡಿಕೆಯಲ್ಲಿ ತಪ್ಪಿಲ್ಲ. ಆದರೆ ಸರ್ಕಾರದ ಪರಿಸ್ಥಿತಿಯನ್ನೂ ಅವರು ಗಮನದಲ್ಲಿಟ್ಟುಕೊಳ್ಳಬೇಕು. ಹಠವಿಲ್ಲದೆ ಸಹಕಾರ ನೀಡಬೇಕು” ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಸಚಿವರು ನೌಕರರೊಂದಿಗೆ ಸಭೆ ನಡೆಸಿದ್ದಾರೆ ಎಂಬುದನ್ನು ಅವರು ನೆನಪಿಸಿದ್ದಾರೆ.
“ಸಾರ್ವಜನಿಕರ ಹಿತವೇ ಮೊದಲಾದ್ದು. ಕೆಲವು ನೌಕರರು ಈಗಾಗಲೇ ಕೆಲಸಕ್ಕೆ ಹಾಜರಾಗಿದ್ದಾರೆ. ಅವರಿಗೆ ಅಭಿನಂದನೆ” ಎಂದು ಡಿಸಿಎಂ ಹೇಳಿದ್ದಾರೆ.
ಇತ್ತ, ಹಳದಿ ಮೆಟ್ರೊ ಮಾರ್ಗದ (Yellow Metro Line) ಉದ್ಘಾಟನೆಯ ಕುರಿತು ಮಾತನಾಡಿದ ಡಿ.ಕೆ.ಶಿವಕುಮಾರ್, “ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಸ್ಟ್ 10ರಂದು ಬರುವ ಸಾಧ್ಯತೆ ಇದೆ. ನಾವು ಈಗಾಗಲೇ ತಯಾರಿ ಪರಿಶೀಲನೆ ಆರಂಭಿಸಿದ್ದೇವೆ. ಕಾರ್ಯಕ್ರಮದ ಅಧಿಕೃತ ಸಮಯ ಇನ್ನೂ ಘೋಷಣೆಯಾಗಿಲ್ಲ” ಎಂದು ತಿಳಿಸಿದ್ದಾರೆ.
ಇದೇ ದಿನ ಬಿಜೆಪಿ ವತಿಯಿಂದ ರೈಲ್ವೆ ಸಂಬಂಧಿತ ಕಾರ್ಯಕ್ರಮವೂ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
-
ಬಿಬಿಎಂಪಿ3 months ago
ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯನ್ನು ಗ್ರೇಟರ್ ಬೆಂಗಳೂರು ಪ್ರದೇಶಕ್ಕೆ
-
ಬೆಂಗಳೂರು2 years ago
ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಮುಖ್ಯ – ಡಾ. ಕೆ.ಸಿ ರೋಹಿತ್
-
ದೇಶ2 years ago
ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ
-
ಚುನಾವಣೆ2 years ago
ಬಿಬಿಎಂಪಿ ಚುನಾವಣೆ ಡಿಸೆಂಬರ್ನಲ್ಲಿ ನಡೆಯುವ ಸಾಧ್ಯತೆ: ಸಚಿವರಾಮಲಿಂಗಾರೆಡ್ಡಿ
-
ರಾಜಕೀಯ2 years ago
Gruhalaxmi ಗೃಹಲಕ್ಷಿö್ಮ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಹೀಗೆ ಚೆಕ್ ಮಾಡಿ
-
ಬೆಂಗಳೂರು1 year ago
ನೀರಿಲ್ಲ ನೀರಿಲ್ಲ ನಾಳೆ ನಲ್ಲಿಯಲ್ಲಿ ನೀರು ಬರೋದಿಲ್ಲ
-
ಬೆಂಗಳೂರು8 months ago
ಯಶವಂತಪುರ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶ -ಎಸ್ ಟಿ ಸೋಮಶೇಖರ್
-
ರಾಜ್ಯ2 years ago
ದೇಶದ ಎಲ್ಲಾ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಲು ಮುಂದಾದ ಸರ್ಕಾರ! ಇಂದೇ ಅರ್ಜಿ ಸಲ್ಲಿಸಿ