ಬೆಂಗಳೂರು

ಮೆಗಾಸ್ಟಾರ್ ಚಿರಂಜೀವಿ ಜೊತೆ ನಟನೆಗೆ ಶಾಸಕ ಪ್ರದೀಪ್ ಈಶ್ವರ್‌ಗೆ ಅವಕಾಶ

ಚಿಕ್ಕಬಳ್ಳಾಪುರ: ಟಾಲಿವುಡ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ (Chiranjeevi) ಜೊತೆ ನಟನೆಗೆ ತನಗೆ ಅವಕಾಶ ಸಿಕ್ಕಿರುವುದಾಗಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹೇಳಿದರು.

ಚಿಕ್ಕಬಳ್ಳಾಪುರ ನಗರದಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ನಾನು ಮೆಗಾಸ್ಟಾರ್ ಚಿರಂಜೀವಿಯವರ ದೊಡ್ಡ ಫ್ಯಾನ್. ಚಿರಂಜೀವಿ ಅವರಿಗೆ ನನ್ನ ಮೇಲೆ ವಿಶೇಷವಾದ ಪ್ರೀತಿ ಇದೆ. ನಾನು ಚಿರಂಜೀವಿ ಅವರ ಸಮುದಾಯದ ಹುಡುಗ, ಶಾಸಕನಾದಾಗಲೂ ಮನೆಗೆ ಕರೆಸಿದ್ದರು ಎಂದು ತಿಳಿಸಿದರು.

ಪವನ್ ಕಲ್ಯಾಣ್ ಅವರು ಗೆದ್ದಾಗ ನಾನು ಫೋನ್ ಮಾಡಿ ವಿಶ್ ಮಾಡಿದ್ದೆ. ನಟನೆಗೆ ಅವಕಾಶದ ಬಗ್ಗೆ ಚರ್ಚೆ ನಡೆದಿರೋದು ನಿಜ. ಸದ್ಯ ಚಿರಂಜೀವಿ ಅವರು ವಿಶ್ವಾಂಬರ ಚಿತ್ರದಲ್ಲಿ ಈಗ ನಟನೆ ಮಾಡುತ್ತಿದ್ದಾರೆ. ಇದಾದ ನಂತರ ಮುಂದಿನ ಚಿತ್ರದಲ್ಲಿ ಅವಕಾಶದ ಬಗ್ಗೆ ಚರ್ಚೆ ನಡೆದಿದೆ. ಯಾವ ಪಾತ್ರ ಏನು ಎಂಬುದು ಮುಂದಿನ ದಿನಗಳಲ್ಲಿ ಅವರೇ ತಿಳಿಸಲಿದ್ದಾರೆ ಎಂದರು.

ನನಗೆ ಚಿರಂಜೀವಿ ಅವರ ಜೊತೆ ಡ್ಯಾನ್ಸ್ ಮಾಡಬೇಕು ಎಂಬುದು ಆಸೆ. ಒಂದು ಸಣ್ಣ ಸ್ಟೆಪ್ ಹಾಕಲು ಅವಕಾಶ ಸಿಕ್ರೂ ಅದು ನನ್ನ ಸೌಭಾಗ್ಯ. ನಾನು ರಾಜಕಾರಣದಲ್ಲಿ ಕೆಲವರನ್ನ ಡ್ಯಾನ್ಸ್ ಮಾಡಿಸಿದ್ದೀನಿ. ಆದರೆ ಚಿರಂಜೀವಿ ಅವರ ಜೊತೆ ಡ್ಯಾನ್ಸ್ ಮಾಡಿದ್ರೆ ಅದು ನನಗೆ ಖುಷಿ ಅಂತಾ ಪರೋಕ್ಷವಾಗಿ ಸಂಸದ ಸುಧಾಕರ್‌ಗೆ ಟಾಂಗ್ ಕೊಟ್ಟರು.

Leave a Reply

Your email address will not be published. Required fields are marked *

Trending

Exit mobile version