ದೇಶ

30 ಕೆಜಿಗೂ ಹೆಚ್ಚು ರುದ್ರಾಕ್ಷಿಗಳನ್ನು ಧರಿಸಿರೋ ರುದ್ರಾಕ್ಷಿ ಬಾಬಾ!

ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆಯಲಿರು ಮಹಾ ಕುಂಭಮೇಳಕ್ಕೆ ಕೇವಲ ಒಂದು ವಾರ ಬಾಕಿ ಉಳಿದಿದೆ, ಭಾರತ ಮತ್ತು ಪ್ರಪಂಚದಾದ್ಯಂತದ ಸಾವಿರಾರು ಭಕ್ತರು, ದಾರ್ಶನಿಕರು ಮತ್ತು ಮುನಿಗಳು ಈಗಾಗಲೇ ಪ್ರಯಾಗರಾಜ್‍ಗೆ ಆಗಮಿಸಲು ಪ್ರಾರಂಭಿಸಿದ್ದಾರೆ, ಇದೇ ವೇಳೆ ಮಹಾಕುಂಭದಲ್ಲಿ ಬರೋಬ್ಬರಿ 30 ಕೆಜಿಗಳಷ್ಟು ರುದ್ರಾಕ್ಷಿಗಳನ್ನು ಧರಿಸಿರುವ ರುದ್ರಾಕ್ಷಿ ಬಾಬಾ ಅವರು ಆಕರ್ಷಣೆಯ ಕೇಂದ್ರವಾಗಿದ್ದಾರೆ,
ಹೌದು, 2025 ರ ಮಹಾ ಕುಂಭದಲ್ಲಿ ಗಮನಾರ್ಹ ವ್ಯಕ್ತಿಗಳ ಪೈಕಿ ರುದ್ರಾಕ್ಷಿ ಬಾಬಾ ಅವರು ತಮ್ಮ ವಿಭಿನ್ನ ನೋಟಕ್ಕಾಗಿಯೇ ವ್ಯಾಪಕ ಗಮನವನ್ನು ಸೆಳದಿದ್ದಾರೆ, ರುದ್ರಾಕ್ಷಿ ಮಣಿಗಳ 108 ಮಾಲೆಗಳಲ್ಲಿ ಬರೋಬ್ಬರಿ 11,000 ಕ್ಕೂ ಹೆಚ್ಚು ಮಣಿಗಳನ್ನು ಧರಿಸಿದ್ದಾರೆ ಬಾಬಾ. ಇದು ಸುಮಾರು 30 ಕೆಜಿ ತೂಗುತ್ತಿದ್ದು, ಅವರು ಧರಿಸುವ ರುದ್ರಾಕ್ಷಿ ಮಣಿಗಳ ಸಂಖ್ಯೆ ಬೆಳಯುತ್ತಲೇ ಹೋಗುತ್ತಿದೆ, ಇದಕ್ಕಾಗಿಯೇ ಅವರನ್ನು ರುದ್ರಾಕ್ಷಿ ಬಾಬಾ ಎಂದು ಭಕ್ತರಿಂದ ಪ್ರೀತಿಯಿಂದ ಕರೆಸಿಕೊಳ್ಳುತ್ತಾರೆ,

Leave a Reply

Your email address will not be published. Required fields are marked *

Trending

Exit mobile version